ಪಬ್ಲಿಕ್ ಟಿವಿಯ ಸಾರಥಿ "ಹೆಚ್. ಆರ್. ರಂಗನಾಥ್" ಮತ್ತು ಬಳಗದವರಿಂದ
ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ
ನಮ್ಮ ರಾಜ್ಯದ ಬಂಧುಗಳೇ ದಯವಿಟ್ಟು ಗಮನಿಸಿ, ಇದು ನಮ್ಮ ಸಮಸ್ಯೆ.
ಇಂದು ನಮ್ಮ ದೇಶವನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗು "ಭ್ರಷ್ಟಾಚಾರ" ಯಾವ ಸರಕಾರಿ ಇಲಾಖೆ ಇಂದು ಭ್ರಷ್ಟಾಚಾರವಿಲ್ಲದೇ ನಡೆಯುತ್ತಿ.ದೆ? ಈ ಒಂದು ಪಿಡುಗಿನಿಂದ ನಮ್ಮ ಜನರು ಏಳಿಗೆಯಾಗುತ್ತಿಲ್ಲ. ಅಭಿವೃದ್ಧಿಯೂ ಆಗುತ್ತಿಲ್ಲ ನಮ್ಮ ದೇಶವನ್ನು ಅಳಿದ ಬ್ರಿಟೀಷರಿಗಿಂತಲೂ ಕ್ರೂರವಾಗಿ ಸರಕಾರಿ ಕಛೇರಿಗಳು ಅಲ್ಲಿನ ಕಾರ್ಯನಿರ್ವಾಹಕರುಗಳು ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಇನ್ನೂ ಸಾವಿರ ವರ್ಷ ಬಂದರೂ ನಮ್ಮ ದೇಶ ಉದ್ದಾರವಂತೂ ಆಗುವುದಿಲ್ಲ. ಈ ಭ್ರಷ್ಟಾಚಾರವನ್ನು ಬೆಳೆಸಿದರು, ಬೆಳೆಸುತ್ತಿರುವವರು ನಾವುಗಳೇ, ನಮ್ಮ ಸ್ವಂತಕ್ಕೆ ಕೆಲಸ ಬೇಕೇಂದರೆ ನಾವುಗಳೇ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಮುಂದಾದೆವು ಅದು ಬೆಳೆಯುತ್ತಾ ಬೆಳೆಯುತ್ತಾ ದೊಡ್ಡ ಮರದ ಹಾಗೆ ಬೆಳೆಯಿತು. ಈಗ ಅದನ್ನು ನಾಶ ಮಾಡಬೇಕಾದವರೂ ಸಹ
ನಾವುಗಳೇ.
ಲೋಕಾಯುಕ್ತ ರಾಗಲೀ, ಮುಂದೆ ಬರುವ, ಬರಬಹುದಾದ ? ಲೋಕಪಾಲ್ ಸಹ ಸಂಪೂರ್ಣ ಭ್ರಷ್ಟಾಚಾರ ತೊಡಗಿಸುತ್ತೆ ಅಂತ ಅಂದುಕೊಳ್ಳುವುದು ತಪ್ಪು. ಒಬ್ಬ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತಾಗ ನಾವೆಲ್ಲರೂ ಬೆಂಬಲಿಸಿದೆವು, ಅಂದರೆ ಅದರ ವಿರುದ್ಧ ನಮಗೆ ದ್ವೇಷ ಇದೆ. ಈ ಭ್ರಷ್ಟಾಚಾರವನ್ನು ಸಂಪೂರ್ಣ ಕಿತ್ತೊಗೆಯಬೇಕು ಎನ್ನುವ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಈ ವ್ಯವಸ್ಥೆಯ ಮೇಲೆ ಕೋಪವಿದೆ. ಅಂದಮೇಲೆ ನಾವೇ ಯಾಕೆ ಅದರ ವಿರುದ್ಧ ನಿಲ್ಲಬಾರದು? ನಮ್ಮ ಮುಂದೆ ಇರುವ ದಾರಿಗಳನ್ನು ಅವಕಾಶಗಳನ್ನು ಬಳಸಿಕೊಂಡು, ಈ ಪಿಡುಗನ್ನು ಸಂಪೂರ್ಣ ನಾಶ ಮಾಡುವ ಸಂಕಲ್ಪ ಮಾಡಿ, ಶಾಶ್ವತವಾಗಿ ತಡೆಯುವ ಪ್ರಯತ್ನ ಯಾಕೆ ಮಾಡಬಾರದು ? ಅಲ್ಲವೆ.
ನಮ್ಮ ದೇಶದಿಂದ ಬ್ರಿಟೀಷರನ್ನು ಹೊರ ಹಾಕಲು ಲಕ್ಷಾಂತರ ದೇಶ ಭಕ್ತರು ತಮ್ಮ ಪ್ರಾಣ ತ್ಯಾಗ ಮಾಡಿದರು, ಹೋರಾಟಗಳು, ಸತ್ಯಾಗ್ರಹಗಳು ನಡೆದವು ಇದರ ಪ್ರತಿಫಲವಾಗಿ ಇಂದು ನಾವು ಸ್ವಾತಂತ್ರ್ಯದಿಂದ ನಮ್ಮ ಸ್ವತಂತ್ರ್ಯ ಭಾರತದಲ್ಲಿ ರಾಜಾರೋಷವಾಗಿ ಜೀವಿಸುತ್ತಿದ್ದೇವೆ.
ಅಂತಹ ದೊಂದು ಸಂಗ್ರಾಮ ಈಗ ನಡೆಯಬೇಕಿದೆ. ನಾವುಗಳು ಯಾರೂ ಪ್ರಾಣ ತ್ಯಾಗಮಾಡಬೇಕಿಲ್ಲ, ಚಳುವಳಿಗಳನ್ನು ಮಾಡಬೇಕಿಲ್ಲ, ಸತ್ಯಾಗ್ರಹವನ್ನೂ ಸಹ ಮಾಡುವ ಅವಶ್ಯಕತೆ ಯೂ
ಇಲ್ಲ.
ನಮ್ಮ ಮುಂದೆ ಇರುವ ಸುಲಭದ ದಾರಿಯನ್ನು ಹಿಡಿದುಕೊಂಡು ಹೊರಡಬೇಕು. ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿಬೇಕಾದ ಒಂದೇ ಒಂದು ನಂಬಿಕಾರ್ಹ ಅಂಗ "ಪತ್ರಿಕೋದ್ಯಮ"
ನಮ್ಮ ದೇಶದ ಸಂವಿಧಾನದ ಮೂರು ಪ್ರಮುಖ ಅಂಗಗಳಾದ ೧) ಶಾಸಕಾಂಗ ೨) ಕಾರ್ಯಾಂಗ ೩) ನ್ಯಾಯಾಂಗ ಈ ಮೂರು ಅಂಗಗಳಲ್ಲಿ ೧) ಶಾಸಕಾಂಗ ೨) ಕಾರ್ಯಾಂಗಗಳು ಅದರ ಕಾರ್ಯಾನಿರ್ವಾಹಕರುಗಳು ತಮ್ಮ ಸ್ವಾರ್ಥದಿಂದ ಭ್ರಷ್ಟಾಚಾರದಿಂದ ಕೊಳೆತು ನಾರುತ್ತಿದೆ. ಈ ಎರಡು ಅಂಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ನೌಕರರು ನಾವುಗಳು ಕಟ್ಟುವ ತೆರಿಗೆ ಹಣದಿಂದ ಕೈತುಂಬ ಸಂಬಳ, ಭತ್ಯೆ ರೂಪದಲ್ಲಿ ನಾನಾ ಸವಲತ್ತುಗಳು ನಮ್ಮ ಸರಕಾರದ ಕಡೆಯಿಂದ ನಾವುಗಳು ಕೊಡುತ್ತಿದ್ದೇವೆ. ಪ್ರತಿಯೊಬ್ಬ ಸರಕಾರಿ ನೌಕರರಿಗೆ ಕೈತುಂಬ ಸಂಬಳ, ಮನೆ ಬಾಡಿಗೆ, ಸಮಯಕ್ಕೆ ತಕ್ಕ ಹಾಗೆ ಭತ್ಯೆಗಳು, ನಿವೃತ್ತಿಯ ಕಾಲಕ್ಕೆ ಕೈತುಂಬ ಹಣ ಇಷ್ಟೆಲ್ಲಾ ಸವಲತ್ತುಗಳನ್ನು ನಮ್ಮ ತೆರಿಗೆ ಹಣದಿಂದ ಪಡೆಯುತ್ತಿದ್ದರೂ ಸಹ ಲಂಚದ ಹಣಕ್ಕೆ ಕೈಯೊಡ್ಡಿ ಮತ್ತೂ ಹಣ ಮಾಡುವ ಕೆಟ್ಟಚಾಳಿಯಿಂದ ತಮ್ಮ ಕಾರ್ಯನಿರ್ವಹಣೆಯನ್ನು ಮರೆತು ಅಮಾಯಕ ಜನರ ಬಳಿ ಭಿಕ್ಷೆ ಬೇಡುವ ರೀತಿಯಲ್ಲಿ ಕೈಯೊಡ್ಡಿ ನಿಲ್ಲುತ್ತಾರೆ. ಆ ಹಣದಿಂದಲೇ ಅವರ ಆಸ್ತಿ, ಸಂಪತ್ತುಗಳಿಸುತ್ತಾರೆ. ತಾವು ಏನೋ ಸಾಧನೆ ಮಾಡಿದ್ದೇವೆ ಎಂಬಂತೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ. ಇಂತಹ ಭ್ರಷ್ಟ ಅಧಿಕಾರ ವರ್ಗದಿಂದ ಶಾಸಕಾಂಗವೂ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಜನರು ನಂಬಿರುವುದು ಅಧಿಕಾರಿಗಳನ್ನು, ಅದೇ ಅಧಿಕಾರಿಗಳೇ ತಮ್ಮ ಸ್ವಾರ್ಥಕ್ಕೆ ತಮ್ಮ ತನವನ್ನೇ ಬಲಿಕೊಟ್ಟು ರಾಜಕಾರಣಿಗಳ ಕೈಗೊಂಬೆಗಳಾಗಿ ರಾಜಕಾರಣಿಗಳ ಕೋಟಿಗಟ್ಟಲೇ ಆಸ್ತಿ ಮಾಡುವುದಕ್ಕೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಇಡೀ ನಮ್ಮ ವ್ಯವಸ್ಥೆಯನ್ನೇ ಭ್ರಷ್ಟವನ್ನಾಗಿಸಿದ್ದಾರೆ ಈ ಎರಡು ಅಂಗಗಳ ಕಾರ್ಯನಿರ್ವಹಣೆಯನ್ನು ಗಮನಿಸಿಯೂ ನಮ್ಮ ದೇಶದ ಕಾನೂನಿನ ಅನ್ವಯ ನಿಸ್ಸಹಾಯಕವಾಗಿ ನಮ್ಮ ನ್ಯಾಯಾಂಗ ಕೈಚೆಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಭ್ರಷ್ಟ ವ್ಯವಸ್ಥೆಯನ್ನು ಈ ಭ್ರಷ್ಟಾಚಾರವನ್ನು ಶಾಶ್ವತವಾಗಿ ಕಿತ್ತೊಗೆಯಲು.................
ಪತ್ರಿಕೋದ್ಯಮದ ನಮ್ಮ ಪತ್ರಕರ್ತರ ಪ್ರಾಮಾಣಿಕ ಪ್ರಯತ್ನ ಮುಖ್ಯ....
ಇಂದಿನ ಆಧುನಿಕ ವಿಜ್ಞಾನ ಯುಗದಲ್ಲಿ ಪತ್ರಿಕೋದ್ಯಮ ಪ್ರಬಲವಾಗಿ ಬೆಳೆದು ನಿಂತಿದೆ. ಪತ್ರಿಕೆಗಳು, ದೃಶ್ಯಮಾಧ್ಯಮಗಳ ಪತ್ರಕರ್ತ ಮಿತ್ರರು ಪ್ರಾಮಾಣಿಕವಾಗಿ ತಮ್ಮ ಪ್ರಯತ್ನ ಮಾಡುವುದೇ ಆದರೆ ಕೆಲವೇ ದಿನಗಳಲ್ಲಿ ಈ ಭ್ರಷ್ಟಾಚಾರದ ಬೇರುಗಳನ್ನು ಸಡಿಲಗೊಳಿಸಬಹುದು ನಂತರ ಶಾಶ್ವತವಾಗಿ ಕಿತ್ತೊಗೆಯಬಹುದು.
ಪತ್ರಕರ್ತ ಮಿತ್ರರೇ,
ದಯವಿಟ್ಟು ಈ ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ನಿಮ್ಮ ಸಹಕಾರ ಅತಿ ಮುಖ್ಯ. ಈಗಿನ ಪರಿಸ್ಥಿತಿಯಲ್ಲಿ ನಮಗೆ ಬೇರೆ ಯಾವುದೇ ದಾರಿಗಳಿಲ್ಲ. ಪ್ರತಿಭಟನೆ, ಸತ್ಯಾಗ್ರಹಗಳಿಂದ ಯಾವುದೇ ರೀತಿಯ ಪ್ರಯೋಜವಾಗುವುದಿಲ್ಲ.
ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳ ವರದಿಗಾರರು ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಇದ್ದೇ ಇರುತ್ತಾರೆ. ಅಯಾ ತಾಲ್ಲೂಕುಗಳ ಸರಕಾರಿ ಇಲಾಖೆಗಳಿಗೆ ಸರಕಾರದಿಂದ ಬಿಡುಗಡೆಯಾಗುವ (ಅನುದಾನ) ಹಣದ ವಿವರ ಹಾಗೂ ಅದರ ಖರ್ಚು ವೆಚ್ಚದ ಬಗ್ಗೆ "ಮಾಹಿತಿ ಹಕ್ಕಿನ ಅಡಿಯಲ್ಲಿ" ಅವರಿಂದಲೇ ವಿವರಗಳನ್ನು ಪಡೆದು ಅಲ್ಲಿನ ಖರ್ಚು ವೆಚ್ಚಗಳ ಬಗ್ಗೆ ಅವರು ಒದಗಿಸಿರುವ ದಾಖಲಾತಿಗಳ ಪರಿಶೀಲಿಸಿದರೆ ಖರೀದಿ ವ್ಯವಹಾರದಲ್ಲಿ ಆಗಿರುವಂತಹ ಅವ್ಯವಹಾರಗಳನ್ನು ಗುರುತಿಸಿ, ಮಾಧ್ಯಮಗಳ ಮೂಲಕ ಜನರಿಗೆ ತಿಳಿಯುವಂತೆ ಮಾಡಬೇಕು.
ಸರಕಾರಿಯ ಬಹುತೇಕ ಕಂದಾಯ, ಲೋಕೋಪಯೋಗಿ, ಸಾರಿಗೆ, ಆರೋಗ್ಯ ಪ್ರತಿಯೊಂದು ಇಲಾಖೆಯಲ್ಲೂ ಅವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಒಂದು ಪೆನ್ಸಿಲ್ ಕೊಳ್ಳುವುದರಿಂದಲೂ ಹಿಡಿದು, ಇಲಾಖೆಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳ ಖರೀದಿಯಲ್ಲೂ ಅವ್ಯವಹಾರ ಮಾಡಿರುತ್ತಾರೆ. ಹಾಗೆಯೇ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಬಿಡುಗಡೆಯಾಗಿರುವ ಸರಕಾರದ ಅನುದಾನದ ಹಣದಲ್ಲಿ ಅಲ್ಲಿ ಬಳಕೆಯಾಗಿರುವ ಹಣದ ಬಗ್ಗೆ ಮಾಹಿತಿಯನ್ನು ಕಾಮಗಾರಿಗಳ ಬಗ್ಗೆ ಜಮಾ-ಖರ್ಚುಗಳ ಬಗ್ಗೆ "ಮಾಹಿತಿ ಹಕ್ಕಿನ ಅಡಿಯಲ್ಲಿ" ವಿವರ ಪಡೆದುಕೊಳ್ಳಬೇಕು. ಬಹುತೇಕ ಜವಾನನಿಂದ ಹಿಡಿದು ಅಧಿಕಾರಿಗಳ ವರೆಗೂ ದುರಾಸೆಯ ಹಣಕ್ಕೆ ಕೈಚಾಚಿಯೇ ಇರುತ್ತಾರೆ. ಅವುಗಳನ್ನು ಮಾಧ್ಯಮಗಳ ಮೂಲಕ ಬಯಲಿಗೆಳೆದು ಜನರಿಗೆ ತೋರಿಸಬೇಕು. ಜನರಿಗೆ ತಿಳಿಯುತ್ತೆ ಜನರ ತರಿಗೆ ಹಣ ತಮ್ಮ ಹಣವನ್ನು ಯಾವ ರೀತಿಯಲ್ಲಿ ಬಳಸಿಕೊಂಡು ತಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬುದು ಅರಿತ ಜನರಿಗೆ ಜಾಗೃತಿ ತಾನಾಗಿಯೆ ಮೂಡುತ್ತದೆ.
ಮೊದಲ ಹಂತದಲ್ಲಿ ಈ ಕಾರ್ಯ ಯಶಸ್ವಿ ಮಾಡಿದರೆ ಇವುಗಳನ್ನು ಬಯಲಿಗೆಳೆಯಲು ಪ್ರಾರಂಭ ವಾದರೆ ಭ್ರಷ್ಟಾಚಾರ ಓಟಕ್ಕೆ ಕಡಿವಾಣ ಹಾಕುವಲ್ಲಿ ಪ್ರಾಥಮಿಕವಾಗಿ ಯಶಸ್ವಿಯಾಗುತ್ತದೆ.
ನಮ್ಮ ಪತ್ರಕರ್ತ ಮಿತ್ರರು ಈ ಭ್ರಷ್ಟಾಚಾರದ ವಿರುದ್ಧ, ಭ್ರಷ್ಟಾಚಾರದ ನಿರ್ಮೂಲನೆ ಮಾಡೇ ಮಾಡುತ್ತೇವೆ. ಇದು ನಮ್ಮ ಧ್ಯೇಯ ಸಂಕಲ್ಪ ಮಾಡಿದರೆ, ನೀವುಗಳು ಯಾರಿಗೂ ಹೆದರುವ , ಯಾರಿಗೂ ತಲೆಬಾಗದೇ ಸ್ವತಂತ್ರವಾಗಿ ತಪ್ಪುಗಳನ್ನು ಬಯಲಿಗೆಳೆದು ಈ ರಾಜ್ಯವನ್ನು ಕಾಪಾಡುವಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದಿದೆ. ಈ ಪಾತ್ರವನ್ನು ನೀವು ಈ ಸಮಯದಲ್ಲಿ ನಿರ್ವಹಿಸಬೇಕು.
ನಮ್ಮಂತಹ ಸಾಮಾನ್ಯ ವ್ಯಕ್ತಿಗಳ ಮನಸ್ಸಿನಲ್ಲಿ ನಿಮ್ಮಂತಹ ಪತ್ರಕರ್ತರ ಮೇಲೆ ಇಷ್ಟೊಂದು ನಂಬಿಕೆ ಇಟ್ಟುಕೊಂಡಿದ್ದೇವೆ ಎಂದರೆ ನೀವು ಯೋಚಿಸಿ ಈ ಭ್ರಷ್ಟಾಚಾರ ನಿರ್ಮೂಲನೆಗೆ ಕಾರ್ಯತಂತ್ರ ರೂಪಿಸಿ ಯಶಸ್ವಿಯಾಗಿಸಿ, ಇಡೀ ರಾಷ್ಟಕ್ಕೆ ಪತ್ರಿಕೋದ್ಯಮದ ಶಕ್ತಿ ಏನೆಂದು ತೋರಿಸಿ, ಇಡೀ ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಹುದು.
ದಯವಿಟ್ಟು ಪ್ರಯತ್ನಿಸಿ. ಜನರ ಮುಂದಿರುವುದು ಇದೊಂದೇ ದಾರಿ ನಿಮ್ಮ ಮುಂದೆ ವಿನಂತಿಸಿಕೊಳ್ಳುತ್ತಿದ್ದೇವೆ.
ಇದು ಒಂದು ಕಥೆಯಲ್ಲ ಕಾದಂಬರಿಯೂ ಅಲ್ಲ.
ನಮ್ಮ ರಾಜ್ಯವನ್ನು ನಮ್ಮ ಜನರ ಹಣವನ್ನು ಕಿತ್ತು ತಿನ್ನುತ್ತಿರುವ ಬಹುದೊಡ್ಡ ಭೂತ ಈ ಭೂತವನ್ನು ಕಿತ್ತೊಗೆಯಬೇಕಾದುದು ನಮ್ಮೆಲ್ಲರ ಕರ್ತವ್ಯ. ಮಾಧ್ಯಮ ಪ್ರಪಂಚಕ್ಕೆ "ಪಬ್ಲಿಕ್ ಟಿವಿ" ಹೊಸ ಹೆಜ್ಜೆಯನ್ನಿರಿಸಿ ಬಂದಿದೆ. "ಶ್ರೀ ಹೆಚ್. ಆರ್. ರಂಗನಾಥ್ " ರವರ ಬಳಗದಿಂದಾರೂ ನಮ್ಮ ಪ್ರಯತ್ನಕ್ಕೆ ಯಶ ಸಿಗಲಿ ಅನ್ನೋ ಆಶಾವಾದದೊಂದಿಗೆ ವಿನಂತಿಸಿಕೊಳ್ಳುತ್ತಿದ್ದೇನೆ.
ರಾಜು ವಿನಯ್ ದಾವಣಗೆರೆ
rajudavanagere@gmail.com

No comments:
Post a Comment